ನಿನ್ನ ಹಾಜರಿ ಇಲ್ಲದೆ | ಗಜಲ್ | ವೆಂಕಟೇಶ ಚಾಗಿ | ninna hajari illade | gajal | venkatesh chagi

* *ನಿನ್ನ ಹಾಜರಿ ಇಲ್ಲದೆ ಮಳೆ ಸುರಿಸದೇ ಮೇಘವು ಹಠ ಹಿಡಿದಾಗಿದೆ ನಿನ್ನ ಹಾಜರಿ ಇಲ್ಲದೆ ಕಾಮನಬಿಲ್ಲಿನ ಬಣ್ಣಗಳು ಬಣ್ಣ ಕಳೆದಾಗಿದೆ ನಿನ್ನ ಹಾಜರಿ ಇಲ್ಲದೆ ಸೋನೆ ಮಳೆಯು ಮೌನರಾಗ ಹಾಡುವುದನು ಮರೆತು ಮಂಕಾಗಿದೆ ತಂಗಾಳಿಯಲಿ ನನ್ನ ಬಿಸಿಯುಸಿರು ತಂಪಾಗಿದೆ ನಿನ್ನ ಹಾಜರಿ ಇಲ್ಲದೆ ಕನಸುಗಳು ತುಂಬಾ ದಿನಗಳ ನಂತರ ರಜೆಯೊಳಗೆ ಮುಳುಗಿವೆ ನನಸಾಗುವ ಕನಸುಗಳು ಶುಭ ಗಳಿಗೆಯ ಮರೆತಾಗಿದೆ ನಿನ್ನ ಹಾಜರಿ ಇಲ್ಲದೆ ಹೂವಿನ ಮಕರಂದಕ್ಕಾಗಿ ಬರುವ ಬಡ ದುಂಬಿಗಳಿಗೂ ದಿಗಿಲಾಗಿದೆ ಪರಿಮಳವು ಕೂಡ ತನ್ನ ಕಂಪು ಕಳೆದುಕೊಂಡಾಗಿದೆ ನಿನ್ನ ಹಾಜರಿ ಇಲ್ಲದೆ ಮುತ್ತಿನ ಹೊತ್ತು ಮೆಲ್ಲ ಮೆಲ್ಲನೆ ಜಾರಿ ಮನದನ್ನೆಯನುನು ಅಪ್ಪುತ್ತಿದೆ ಕವಿಯ ಗುಡಿಸಲರಮನೆಯಲ್ಲೂ ಕತ್ತಲಾಗಿದೆ ನಿನ್ನ ಹಾಜರಿ ಇಲ್ಲದೆ || NEXT ಮತ್ತಷ್ಟು ಓದಿ 👉 ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here)