ನಗೆಯ ಮೇಲೆ
ಏನು ಮರೆಯಲಿ ನಿನ್ನ ನೆನಪುಗಳ ಅಲೆಯ ಮೇಲೆ
ಏನು ನುಡಿಯಲಿ ನನ್ನ ಕನಸುಗಳ ಸುಳಿಯ ಮೇಲೆ
ಮನದ ಅಂಬರದ ಮೇಲೆ ನಿನ್ನ ನಗುವಿನ ಚಿತ್ತಾರ
ಏನು ಚಿತ್ರಿಸಲಿ ನಿನ್ನ ನಗುವಿನ ಅಂದದ ಮೇಲೆ
ಕಾಣದೂರಿನಲ್ಲಿ ಈ ಮನಸು ನಿನಗಾಗಿ ಅಲೆಯುತ್ತಿದೆ
ಏನು ಹುಡುಕಲಿ ನಿನ್ನ ವಿಳಾಸದ ಪತ್ರದ ಮೇಲೆ
ನಶ್ವರ ಬದುಕಿನೊಳಗೊಂದು ಸುಂದರ ದೀಪ ನೀನು
ಏನು ಬೆಳಗಲಿ ನಿನ್ನ ಕಣ್ಣೋಟದ ಬೆಳಕಿನ ಮೇಲೆ
ಅಪರೂಪದ ಖಜಾನೆಯು ಈ 'ಕವಿ'ಗೆ ದೊರೆತಿದೆ
ಏನು ಗಳಿಸಲಿ ನಿನ್ನ ಸೌಂದರ್ಯದ ನಗೆಯ ಮೇಲೆ
=> ವೆಂಕಟೇಶ ಚಾಗಿ
ಮತ್ತಷ್ಟು ಓದಿ
👉 ಕಗ್ಗಗಳು (click here) 👉ಗಜಲ್ ಗಳು (click here) 👉ಕವನಗಳು (click here ) 👉ಕವಿತೆಗಳು (click here ) 👉ಹಾಯ್ಕುಗಳು ( click here) 👉ಹನಿಗವನಗಳು (click here ) 👉ಮಕ್ಕಳ ಕಥೆಗಳು (click here) 👉ಮಕ್ಕಳ ಕವನಗಳು (click here)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ