ಶುಕ್ರವಾರ, ಏಪ್ರಿಲ್ 3, 2026

ನಾವಿಬ್ಬರೂ ಜೊತೆಯಾದಾಗ | ಗಜಲ್ | ವೆಂಕಟೇಶ ಚಾಗಿ | navibbaroo joteyadaga| gajal | venkatesh chagi

 *ಗಜಲ್*


ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ

ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ||


ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ

ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ||


ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ

ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ ||


ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು  ಹೊತ್ತಿದೆ

ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರ ಜೊತೆಯಾದಾಗ ||


ಅಗೋ,ಮುಂಬರುವ ದಿನಗಳ ತುಂಬಾ ನೆರಳು ಬೆಳಕಿನ ಚೆಂದದ ಆಟ

'ಚಾಗಿ'ಯ ಕಲ್ಪನೆಯ ಬದುಕು ನಿಜವಾಗಿದೆ ನಾವಿಬ್ಬರು ಜೊತೆಯಾದಾಗ ||


 => ವೆಂಕಟೇಶ್ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ