ನೆನಪುಗಳ ಬುತ್ತಿ | ಗಜಲ್ | ವೆಂಕಟೇಶ ಚಾಗಿ | nenapugala butti | gajal | venkatesh chagi

 **ಗಜಲ್**


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ ಸಖಿ
ನನಸಾಗದೇ ಉಳಿದ ಕನಸುಗಳ ಸವಿಯ ಮೆಲುಕು ಹಾಕುತಿರುವೆ ಸಖಿ

ಕರಗಿ ಹೋದ ಸಮಯ ಶೇಷವನ್ನೇನೋ ಉಳಿಸಿ ಹೋಗಿದೆ
ಅಳಿದುಳಿದ ಹೆಜ್ಜೆ ಗುರುತುಗಳ ಹೊಳಪ ಮೆಲುಕು ಹಾಕುತಿರುವೆ ಸಖಿ

ನಾವಾಡಿದ ಮಾತುಗಳು ಗಾಳಿಯಲಿ ಕರಗದೆ ಮತ್ತೆ  ರಿಂಗಣಿಸಿವೆ
ಮುತ್ತು ತಂದ ಆ ಮಾತುಗಳ ಘಮವನು ಮೆಲುಕು ಹಾಕುತಿರುವೆ ಸಖಿ

ಮೇಘ ನುಡಿದ ರಾಗ ಅಂದಿನಂತೆ ಈಗಲೂ ಹಸಿರಾಗಿ ಕೇಳುತಿದೆ
ನಿನ್ನ ಹೃದಯ ಬಡಿತದ ತಾಳಕ್ಕೆ ನನ್ನುಸಿರ ರಾಗವನು ಮೆಲುಕು ಹಾಕುತಿರುವೆ ಸಖಿ

ವೆಂಕು ಎಂದು ಕರೆದ ನಿನ್ನ ಧ್ವನಿಗೆ ಈಗಲೂ ಹೂಗಳು ಅರಳುತಿವೆ
ನೀನು ನೀಡಿದ ಪ್ರೀತಿ ಅಮೃತದ ರುಚಿಯ ಮೆಲುಕು ಹಾಕುತಿರುವೆ ಸಖಿ

=> ವೆಂಕಟೇಶ ಚಾಗಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಗೆಯ ಮೇಲೆ | ಗಜಲ್ | ವೆಂಕಟೇಶ ಚಾಗಿ | nageya mele | gajal | venkatesh chagi

ನಿನ್ನ ಹಾಜರಿ ಇಲ್ಲದೆ | ಗಜಲ್ | ವೆಂಕಟೇಶ ಚಾಗಿ | ninna hajari illade | gajal | venkatesh chagi

ಸ್ವಾಗತ | ಗಜಲ್ | ವೆಂಕಟೇಶ ಚಾಗಿ | swagata | gajal | venkatesh chagi