ಬನ್ನಿ ಗೆಳೆಯರೆ
ಸ್ವಾರ್ಥದ ಆಸೆಯ ಬಿಟ್ಟು ದೇಶವನ್ನು ಕಟ್ಟೋಣ ಬನ್ನಿ ಗೆಳೆಯರೇ |
ಮನಸು ಮನಸುಗಳ ಬೆಸೆದು ಭಾವೈಕ್ಯತೆಯ ಬೆಳೆಸೋಣ ಬನ್ನಿ ಗೆಳೆಯರೇ ||
ಹಿರಿಯರು ಕಂಡ ಕನಸುಗಳ ನನಸಾಗಿಸುವ ಕಾಲ ಬಂದಿದೆ |
ಭಾರತಮಾತೆಯ ಮಡಿಲಲ್ಲಿ ಶಾಂತಿಯ ಬಿತ್ತೋಣ ಬನ್ನಿ ಗೆಳೆಯರೇ ||
ಬಲಿಷ್ಠ ತೋಳುಗಳ ಬಳಸಿ ಅಭಿವೃದ್ಧಿಯ ಕಾರ್ಯ ಮಾಡಬೇಕಾಗಿದೆ
ಭವಿಷ್ಯದ ಕುಡಿಗಳಿಗೆ ಸುಂದರ ದೇಶ ಕಟ್ಟೋಣ ಬನ್ನಿ ಗೆಳೆಯರೇ ||
ದೇಶದ ರಕ್ಷಣೆಯ ಹೊಣೆ ಭಾರತೀಯರಾದ ನಮ್ಮದಲ್ಲವೇ |
ದೇಶಪ್ರೇಮ ಪ್ರತಿಯೊಬ್ಬರ ಎದೆಯಲ್ಲಿ ಬಿತ್ತುವ ರೈತರ ಆಗುವ ಬನ್ನಿ ಗೆಳೆಯರೇ ||
ಸ್ವಾರ್ಥಕ್ಕಾಗಿ ದೇಶವನ್ನು ಹೊಡೆಯುವವರ ದೂರ ಅಟ್ಟಬೇಕಾಗಿದೆ|
ಸ್ವಾರ್ಥದ ಮಂತ್ರವನ್ನು ಮನೆಗಳಲ್ಲೂ ಮೊಳಗಿಸುವ ಬನ್ನಿ ಗೆಳೆಯರೇ ||
ಪ್ರತಿ ಕಾಲದಲ್ಲೂ ಭರತಮಾತೆಯ ವೀರ ಸುಪುತ್ರರು ಜನಿಸಬೇಕಿದೆ |
ಪುಣ್ಯ ನೆಲದ ಚಾಗಿಯ ದೇಶಭಕ್ತಿಯ ನುಡಿಗಳ ಹಂಚುವ ಬನ್ನಿ ಗೆಳೆಯರೇ ||
=> ವೆಂಕಟೇಶ ಚಾಗಿ
ಮತ್ತಷ್ಟು ಓದಿ